Introduction
Introduction Appreciative Inquiry is a new perspective of thinking, especially helpful for managers who need to motivate their team members regularly in order to extract their best output. If all…
Introduction Appreciative Inquiry is a new perspective of thinking, especially helpful for managers who need to motivate their team members regularly in order to extract their best output. If all…
Dear customer, to make a payment to me (Mr. Pentareddy .) scan this QR code using any UPI app (like PhonePe, Google Pay, Paytm, etc.)
ಕೆಟ್ಟಹಾಲಿಂದ ಹುಳಿ । ಯಿಟ್ಟಿರ್ದ ತಿಳಿಲೇಸು । ಕೆಟ್ಟ ಹಾರುವವನ ಬದುಕಿಂದ ಹೊಲೆಯನು । ನೆಟ್ಟನೇ ಲೇಸು ಸರ್ವಜ್ಞ||
ಕುತ್ತಿಗದು ಹರಿದಿಹುದು । ಮತ್ತೆ ಬರುತರೇಳುವದು । ಕಿತ್ತು ಬಿಸುಡಲು ನಡೆಯುವದು ಕವಿಜನರ । ಅರ್ತಿಯಿಂ ಪೇಳಿ ಸರ್ವಜ್ಞ||
ಊರಿಂಗೆ ದಾರಿಯ | ನಾರು ತೋರಿದರೇನು ಸಾರಾಯಮಪ್ಪ ಮತವನರುಹಿಸುವ ಗುರು ಆರಾದೊಡೇನು ಸರ್ವಜ್ಞ||
ಸಂದಿರ್ದ ಮಾಸವನು । ಕುಂದದಿಮ್ಮಡಿ ಮಾಡಿ । ಅಂದಿನಾ ತಿಥಿಯ ನೊಡಗೂಡಲಾ ತಾರೆ । ಮುಂದೆ ಬಂದಿಹುದು ಸರ್ವಜ್ಞ||
ಒಂದರೊಳಗೆಲ್ಲವು ಸಂದಿಸುವದನು ಗುರು ಚಂದದಿಂ ತೋರಿಕೊಡದಿರಲು ಶೊಷ್ಯನವ ಕೊಂದನೆಂದರಿಗು ಸರ್ವಜ್ಞ||
ತನುವನ್ನು ಗುರುವಿಂಗೆ। ಮನವನು ಲಿಂಗಕ್ಕೆ। ಧನವ ಜಂಗಮಕೆ ವಂಚಿಸದ ಭಕ್ತಂಗೆ। ಅನಘ ಪದವಹುದು ಸರ್ವಜ್ಞ||
ಕನಕದಿಂ ಹಿರಿದಿಲ್ಲ। ದಿನಪನಿಂ ಬೆಳಗಿಲ್ಲ। ಬೆನಕನಿಂದಧಿಕ ಗಣವಿಲ್ಲಪರದೈವ । ತ್ರಿಣಯನಿಂದಿಲ್ಲ ಸರ್ವಜ್ಞ||
ಸೀತಧಾತುಗಳುಂಟು । ಜಾತಿಹವು ಕುಕ್ಷಿಗಳು । ಪಾತಕರು ಮರದಿ ತಿರಿದುಂಬ ನಾಡಿಗೆ । ಏತಕ್ಕೆ ಬಹರು ಸರ್ವಜ್ಞ||
You must be logged in to post a comment.