Blind related post

Reading Time: < 1 minute
Read Previous post!
Read Next post!

ಲಾಕ್ ಡೌನ್ ನಲ್ಲಿ ನರಳುತ್ತಿರುವ ಅಂಗವಿಕಲರು ಇಡಿ ದೇಶವೇ ಕರೋನ ವೈರಸ್ ನಿಂದಾಗಿ ಲಾಕ್ಡೌನ್ ಇದೆ. ಸರ್ಕಾರ ಬಡವರು, ವೃದ್ಧರು, ಮಹಿಳೆಯರು, ಬಿಪಿಎಲ್ ಕುಟುಂಬದಾರರು ಹೀಗೆ ಎಲ್ಲರಿಗೂ ಒಂದಲ್ಲ ಒಂದು ರೀತಿಯ ಸವಲತ್ತುಗಳನ್ನು ಘೋಷಿಸಿದೆ ಸಂತೋಷದ ವಿಷಯ.

ಆದರೆ ವಿಕಲಚೇತನರ ಬಗ್ಗೆ ಸರ್ಕಾರವಾಗಲಿ, ಯಾವುದೇ ಸಂಘ ಸಂಸ್ಥೆಗಳಾಗಲಿ ಯಾವುದೇ ತರನಾದ ನೆರವು ನೀಡುತ್ತಿಲ್ಲ, ಯೋಚಿಸಿ ನಿರ್ಗತಿಕ ಅಂಗವಿಕಲರು ಯಾವುದೇ ಆದಾಯವಿಲ್ಲದೆ, ನೆರವು ಇಲ್ಲದೆ ಬದುಕು ಸಾಗಿಸುವುದೇಗೆ, ಅಂಗವಿಕಲರ ಆರೋಗ್ಯ ಹದಗೇಟ್ಟರು ತೋರಿಸಿಕೊಳ್ಳುವ ಪರಿಸ್ಥಿತಿ ಇಲ್ಲ,, ಅವರನ್ನೆ ಅವಲಂಬಿಸಿರುವ ಕುಟುಂಬಗಳು ಮೂಕ ರೋದನೆ ಅನುಭವಿಸುತ್ತಿದ್ದಾರೆ, ಇವರ ಬಗ್ಗೆ ಯಾರ ಗಮನ ಹರಿಸಬೇಕು ,ಹಲವು ಅಂಗವಿಕಲರ ಸಂಘ ಸಂಸ್ಥೆಗಳು ಸಹ ಯಾರು ಆರ್ಥಿವಾಗಿ ಸಬಲರಲ್ಲ ಹೀಗಿರುವಾಗ ಸಹಾಯ ಮಾಡಲು
ಅಂಗವಿಕಲರಿಗೆ ಸರತಿ ಸಾಲಿನಲ್ಲಿ ನಿಂತು ದಿನಸಿ ಸಾಮಗ್ರಿಗಳನ್ನು ಪಡೆಯಲಾಗದು. ಖರೀದಿಸಲು ಆರ್ಥಿಕವಾಗಿಯೂ ಅವರು ಸಬಲರಲ್ಲ.
ಸರ್ಕಾರ ಅಂಗವಿಕಲರ ಖಾತೆಗೆ 3 ತಿಂಗಳ ಮಾಶಾಸನ ಹಾಕುತ್ತವೆ ಎಂದು ಭರವಸೆ ನೀಡಿದೆ ಆದರೆ ನಗರ ಲಾಕ್ ಡೌನ್ ಇರುವುದರಿಂದ ಅಂಗವಿಕಲರು ಬ್ಯಾಂಕ್ ಗಳಿಗೆ ತೆರಳಲು ಸಾಧ್ಯವಿಲ್ಲ , ಮಾಸಾಶನದ ಮೇಲೆ ಅವಲಂಬಿತರಾಗಿದ್ದ ಅಂಗವಿಕಲರ ಜೀವನ ತುಂಬ ಗಂಭೀರ ಸ್ಥೀತಿಯಲ್ಲಿದೆ , ಕೆಲವು ಕಡೆ ಬಡವರಿಗೆ ಹಾಲು ,ತರಕಾರಿ, ರೇಷನ್ ಮನೆಗೆ ವಿತರಿಸಿದರೆ , ಅಂಗವಿಕಲರ ಬಗ್ಗೆ ಅವರ ಮನೆಗೆ ಯಾವ ಸೌಲಭ್ಯಗಳಿಲ್ಲದೆ ನೋವು ಅನುಭವಿಸುತ್ತಿದ್ದಾರೆ ಮತ್ತೊಬ್ಬರ ಬಳಿ ಸಹಾಯ ಕೇಳಲು ಬಿಕ್ಷುಕರಂತೆ ಕಾಯಬೇಕು ಎಂದು ಅಳಲನ್ನು ತೋಡಿಕೊಳ್ಳುತ್ತಿದ್ದಾರೆ
ಆದ್ದರಿಂದ ದಯವಿಟ್ಟು ಸರ್ಕಾರ ಹಾಗು ದಾನಿಗಳು ಸಂಘ ಸಂಸ್ಥೆಗಳು ಅಂಗವಿಕಲರ ಕಡೆ ಗಮನ ಹರಿಸಿ, ಅಂಗವಿಕಲರ ಮನೆ ಬಾಗಿಲಿಗೆ , ತಲುಪಿಸುವ ವ್ಯವಸ್ಥೆ ಮಾಡಬೇಕೆಂದು ಪ್ರಾರ್ಥಿಸಿಕೊಳ್ಳುತ್ತೇವೆ.

ನಮ್ಮ ಹಕ್ಕು ಹಾಗು ಸೌಲಭ್ಯಗಳಿಗಾಗಿ ಹೋರಾಡುತ್ತಿರುವ ಅಂಗವಿಕಲರ ಸಂಘ ಸಂಸ್ಥೆಗಳು ಆರ್ಥಿಕವಾಗಿ ಸಬಲರಿರುವುದಿಲ್ಲ , ಹಾಗಾಗಿ ವಿಕಲಚೇತನರು ಮೌನವಹಿಸಿದ್ದಾರೆ ಆದ್ದರಿಂದ ಮಾನ್ಯರಾದ ತಾಲೂಕು ಆಡಳಿತ ಸಂಘ ಸಂಸ್ಥೆಗಳು ವಿಕಲಾಂಗರ ಕಡೆ ಗಮನ ಹರಿಸಬೇಕು ಎಂದು ತಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೆ,,

ತಮ್ಮ ಸಹಾಯ ಸಹಕಾರಕ್ಕೆ ನಾವು ಬದ್ದರಾಗಿರುತ್ತೆವೆ,,,
ತಾವು ಅಂಗವಿಕಲರಿಗೆ ಮನೆ ಮನೆಗೆ ಆಹಾರ ಹಾಲು ತರಕಾರಿ ವಿತರಿಸಲು ನಮ್ಮ ಸಹಕಾರವಿದ್ದರೆ ನಾವು ಖಂಡಿತ ತಮ್ಮೊಂದಿಗೆ , ಕರೋನ ವೈರಸ್ ವಿರುದ್ದ ಹೊರಾಡಲು ಸದಾ ಸಿದ್ದರಿದ್ದೇವೆ ಎಂದು ಬಯಸುತ್ತೇವೆ ಸಮಾಜಕ್ಕೆ ಈ ಕರೋನ ವೃರಸ್ ಜಾಗೃತಿಗಾಗಿ ನಮ್ಮದು ಅಳಿಲು ಸೇವೆ ಮಾಡಲು ಬಯಸುತ್ತೇವೆ

ಈ ವಿಷಯ ಸರ್ಕಾರಕ್ಕೆ ಮುಟ್ಟಬೇಕು ನಮ್ಮ ಎಲ್ಲಾ ವಿಕಲಚೇತನ ಸ್ನೇಹಿತರ ಪರವಾಗಿ ಹಾಗೂ ವಿಕಲಚೇತನ ಸಂಘ ಸಂಸ್ಥೆಗಳ ಪರವಾಗಿ ನಮ್ಮ ಮನವಿ,,

ಅಂಜಲಿ ಬೆಳಗಲ್
ಅಧ್ಯಕ್ಷರು
ಪಂಡಿತ ಪುಟಅಂಗವಿಕಲರು,ಯಿ ಅಂಗವಿಕಲರ ಸಂಘ
,ಅಂಬೆ ಪ್ರಕಾಶನ ( ರಿ) ನಂ 188736 /2017 ಹೊಸಪೇಟೆ

Read Previous post!
Read Next post!