ಶುಂಠಿ

Reading Time: < 1 minute

ಅಧ್ಯಯನಗಳ ಪ್ರಕಾರ, ಇದು ಒಳ್ಳೆಯ ಆ್ಯಂಟಿ ಬಯೋಟಿಕ್. ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿಸಹಾಯಕ. ಸುಲಭ ಜೀರ್ಣಕಾರಿ.

ಪ್ರತಿಯೊಬ್ಬರ ಮನೆಯ ಅಡುಗೆ ಮನೆಯ ಯಾವುದಾದರೂ ಭಾಗದಲ್ಲಿ ಶುಂಠಿ ಇದ್ದೇ ಇರುತ್ತದೆ. ಪುರಾತನ ಕಾಲದಿಂದಲೂ ನಮ್ಮ ಅಜ್ಜ ಅಜ್ಜಿಯರು ಆಸ್ಪತ್ರೆಗಳಿಲ್ಲದ ಆ ಸಮಯದಲ್ಲಿ ಶುಂಠಿಯಿಂದ ಬಹಳ ಪ್ರಯೋಜನಗಳನ್ನು ಪಡೆದುಕೊಂಡು ನಮಗೂ ಹೇಳಿ ಕೊಟ್ಟು ಈಗಲೂ ಅದನ್ನು ಮುಂದುವರೆಸಿಕೊಂಡು ಬಂದಿದ್ದಾರೆ. ಇದಕ್ಕೆ ಕಾರಣ ಶುಂಠಿಯಲ್ಲಿರುವ ಅದ್ಭುತ ಆರೋಗ್ಯಕರ ಗುಣ ಲಕ್ಷಣಗಳು. ಶುಂಠಿಯಲ್ಲಿ ” ಜಿಂಜೆರಾಲ್ ” ಎಂಬ ಸಂಯುಕ್ತ ಅಡಗಿದ್ದು, ಇದು ಮನುಷ್ಯನ ಶೀತ, ಕೆಮ್ಮು, ಗಂಟಲು ನೋವು ಮತ್ತು ಇನ್ನಿತರ ಉರಿಯೂತದ ಅಸ್ವಸ್ಥತೆಗಳನ್ನು ಇಲ್ಲವಾಗಿಸುತ್ತದೆ. ಮನುಷ್ಯನ ಹೃದಯದ ಆರೋಗ್ಯಕ್ಕೆ ಮಾರಕವಾಗಿರುವ ಕೆಟ್ಟ ಕೊಲೆಸ್ಟ್ರಾಲ್ ಎಂದೇ ಗುರುತಿಸಿಕೊಂಡ ಎಲ್ ಡಿ ಎಲ್ ಅಂಶಗಳನ್ನು ದೇಹದಲ್ಲಿ ತ್ವರಿತವಾಗಿ ತಗ್ಗಿಸುತ್ತದೆ. ಇದರಿಂದ ಸೋಂಕುಗಳ ನಿವಾರಣೆಯ ಜೊತೆಗೆ ಮನುಷ್ಯ ತನ್ನ ರೋಗ ನಿರೋಧಕ ವ್ಯವಸ್ಥೆಯನ್ನು ಬಲ ಪಡಿಸಿಕೊಂಡು ಆರೋಗ್ಯವಾಗಿ ಜೀವನ ನಡೆಸಬಹುದು.