gk

ನೀರು

ಭೂಮಿಯ ಮೇಲೆ ಜೀವಿಗಳು ವಿಕಸನಗೊಳ್ಳುವುದಕ್ಕೆ ಮತ್ತು ಜೀವಪೋಷಣೆ ಮಾಡುವುದಕ್ಕೆ ನೀರು ಅವಶ್ಯಕವಾಗಿದೆ.

ನೀರು ಒಂದು ಅತ್ಯಮೂಲ್ಯ ನೈಸರ್ಗಿಕ ಸಂಪತ್ತಾಗಿದ್ದು ಇದು ನಿತ್ಯ ಜೀವನಕ್ಕೆ ಅತ್ಯಅವಶ್ಯಕವಾಗಿದೆ

1.ನೀರು ಒಂದು ಅನುಷ್ಣವಾಹಕವಾಗಿದೆ
2. ನೀರು ಒಂದು ಸಂಯುಕ್ತವಾಗಿದ್ದು , ನೀರಿನ ಪ್ರತಿ ಅಣುವಿನಲ್ಲಿ 2ಜಲಜನಕದ ಪರಮಾಣುಗಳು ಮತ್ತು 1 ಆಮ್ಲಜನಕದ ಪರಮಾಣ ಇರುತ್ತವೆ
3.ನೀರಿನ ಅಣುಸೂತ್ರ: H2O
4. ನೀರು ತನ್ನಲ್ಲಿ ಅನೇಕ ವಸ್ತುಗಳನ್ನು ಕರಗಿಸಿಕೊಳ್ಳುವ ಸ್ವಭಾವ ಹೊಂದಿದೆ.ಇದರಿಂದಾಗಿ ನೀರಿನ್ನು ಸಾರ್ವತಿಕ ದ್ರಾವಕ ಎಂದು ಕರೆಯುತ್ತಾರೆ
5.ನೀರು ಲೋಹಗಳೊಡನೆ ವರ್ತಿಸಿ ಆಯಾ ಲೋಹಗಳ ಹೈಡ್ರಾಕ್ಸೈಡ್ ಗಳನ್ನು ಉಂಟುಮಾಡುತ್ತದೆ.
6.ನೀರು ವಾಸನೆ ಮತ್ತು ರುಚಿ ಇಲ್ಲದ ದ್ರವ
7.ಭೂಮಿಯ ಮೇಲೆ ಶೇ.75% ಗಿಂತ ಹೆಚ್ಚಾಗಿ ನೀರಿನಿಂದ ಆವೃತವಾಗಿದ್ದರೂ, ನಮ‍್ಮ ಬಳಕೆಗೆ ಯೋಗ್ಯವಿರುವ ನೀರಿನ ಪ್ರಮಾಣ ಬಹಳ ಕಡಿಮೆ ಇದೆ.

ನೀರನ್ನು 2 ವಿದಗಳಲ್ಲಿ ವಿಂಗಂಡಿಸಲಾಗಿದೆ

1) ಮೆದು ನೀರು

ನೀರಿನ ಗಡಸುತನಕ್ಕೆ ಕಾರಣವಾದ ಕ್ಯಾಲ್ಸಿಯಂ ಮತ್ತು ಮ್ಯಾಗ್ನೆಷಿಯಂ ಲವಣಗಳನ್ನು ಹೊಂದಿರದ ನೀರನ್ನು “ಮೆದು ನೀರು ಎಂದು ಕರೆಯುತ್ತಾರೆ.

ಉದಾ: ಭಟ್ಟಿ ಇಳಿಸಿದ ನೀರು ಮತ್ತು ಮಳೆ ನೀರು

ಮೆದು ನೀರು ಸಾಬೂನಿನೊಂದಿಗೆ ವರ್ತಿಸಿದ ಕೂಡಲೇ ಬೇಗನೆ ನೊರೆ ಕೊಡುವುದರಿಂದ ಗಡಸು ನೀರಿಗಿಂತಲೂ ಹೆಚ್ಚು ಪ್ರಯೋಜನಕಾರಿಯಾಗಿದೆ.

ಮೆದು ನೀರು ಮಾನವರಲ್ಲಿ ಜೀರ್ಣಕ್ರಿಯೆ ಉತ್ತಮಗೊಳ್ಳಲು ಸಹಾಯಕವಾಗಿವೆ

2) ಗಡಸು ನೀರು

ಕ್ಯಾಲ್ಸಿಯಂ ಮತ್ತು ಮ್ಯಾಗ್ನೆಷಿಯಂ ಕ್ಲೋರೈಡ್ ಗಳು,ಸಲ್ಫೇಟುಗಳು ನೀರನ್ನು ಗಡಸು ನೀರು ಎಂದು ಕರೆಯುತ್ತಾರೆ.

ಉದಾ: ಬಾವಿ ನೀರು , ಸಮುದ್ರದ ನೀರು

ನೀರಿನ ಗಡಸುತನವನ್ನು ನಿವಾರಿಸು ವಿಧಾನಗಳು

1 ಕುದಿಸುವ ವಿಧಾನ
2 ಭಟ್ಟಿ ಇಳಿಸುವ ವಿಧಾನ
3 ಸೋಡಾ ವಿಧಾನ

Share this:

Translate »
%d bloggers like this:
Skip to toolbar