ನಮ್ಮ ಕರ್ಮದ ಫಲ
ಸಂತಾನರೂಪದಲ್ಲಿ ಯಾರು ಮರುಜನ್ಮಿಸುತ್ತಾರೆ ಎಂದರೆ…
ಪೂರ್ವ ಜನ್ಮ ಕರ್ಮದ ಫಲವಾಗಿ ಈ ಜನ್ಮದಲ್ಲಿ ತಂದೆ-ತಾಯಿ ಅಕ್ಕತಂಗಿ ಅಣ್ಣತಮ್ಮ ಪತಿ ಪತ್ನಿ ಬಂಧುಬಾಂಧವರು ಇತ್ಯಾದಿ ಸಂಬಂಧಗಳು ಬಾಂಧವ್ಯಗಳು ನಮ್ಮೊಂದಿಗೆ ಬೆಸೆಯುತ್ತೇವೆ. ಸಂಬಂಧಗಳು ನಮಗೆ ಈ ಜನ್ಮದಲ್ಲೂ ಏನಾದರೂ ಕೊಡುವದಿರುತ್ತೆ ಪಡೆಯುದಿರುತ್ತೆ. ಹಾಗೆಯೇ ಪುತ್ರ ಅಥವಾ ಪುತ್ರಿಯ ರೂಪದಲ್ಲಿ ಪೂರ್ವಜನ್ಮದ ಸಂಬಂಧಿಯೆ ಜನ್ಮ ಪಡೆಯತ್ತಾರೆ. ಶಾಸ್ತ್ರ ಪುರಾಣದಲ್ಲಿ ಇದನ್ನೇ ನಾಲ್ಕು ಪ್ರಕಾರವಾಗಿ ಹೇಳಲಾಗಿದೆ.
1. ಋಣಾನುಬಂಧ:- ಪೂರ್ವ ಜನ್ಮದ ಯಾವುದಾದರೂ ಸಂಬಂಧಿಯ ನೀವು ಋಣದಲ್ಲಿ ಇದ್ದಿದ್ದರೆ ಅವರಿಗೆ ನಿಮ್ಮಿಂದ ‘ಧನನಷ್ಟ’ ಆಗಿದ್ದರೆ ಆ ಸಂಬಂಧಿ ನಿಮ್ಮ ಈ ಜನ್ಮದಲ್ಲಿ ನಿಮ್ಮ ಮಗನೋ ಮಗಳಾಗಿ ಜನ್ಮ ಪಡೆಯುತ್ತಾರೆ. ನಿಮ್ಮ ಗಳಿಕೆ ಆಸ್ತಿಯಲ್ಲಿ ಜನ್ಮಿಸಿದ ವ್ಯಕ್ತಿ ತನ್ನ ಧನನಷ್ಟವನ್ನು ಈ ಜನ್ಮದಲ್ಲಿ ಸರಿದೂಗಿಸುವದು.
2. ಶತ್ರು ಪುತ್ರ :-ಪೂರ್ವಜನ್ಮದ ಯಾರೋ ಶತ್ರು ನಿಮ್ಮ ವೈರತ್ವ ಸಾಧಿಸಲು ಸಂತಾನವಾಗಿ ಜನ್ಮಿಸುವುದು. ಆ ಸಂತಾನ ನಿಮ್ಮ ಮನೆಯಲ್ಲಿ ಜಗಳ, ಹೊಡೆದಾಟ ತೊಂದರೆ ನೀಡುತ್ತಾ ಹೋಗುತ್ತದೆ. ಪ್ರತಿಹಂತದಲ್ಲೂ ನಿಮ್ಮ ಅವಮಾನ ಮಾಡುತ್ತಾ ನಿಮ್ಮನ್ನು ದು:ಖಿಸುತ್ತ ಇರಿಸಿ ತಾನು ಖುಷಿ ಇರುತ್ತೆ.
3. ಉದಾಸಿನ ಸೋಮಾರಿ ಪುತ್ರ..ಈ ರೀತಿಯ ಸಂತಾನ ತಂದೆತಾಯಿ ಸೇವೆಯಾಗಲಿ ಅಥವಾ ಮನೋಸುಖವಾಗಲಿ ನೀಡದೆ ಅವರನ್ನ ಅವರವರ ಪಾಲಿಗೆ ಬಿಟ್ಟು ಬಿಡುತ್ತಾರೆ. ವಿವಾಹದ ನಂತರ ಇವರು ಮಾಡುವ ಕೆಲಸವೆ ಮನೆ ಒಡೆದು ಬೇರೆ ಇರುವದು.
4. ಸೇವಕ ಪುತ್ರ: ಪೂರ್ವ ಜನ್ಮದಲ್ಲಿ ನೀವು ಯಾರಾದಾದ್ದರೂ ಉತ್ತಮ ಸೇವೆ ಸೌಖ್ಯ ಬಯಸಿದ್ದರೆ ಅವರು ನಿಮ್ಮ ಸೇವೆಯ ಋಣ ತೀರಿಸಲು ನಿಮ್ಮ ಸಂತಾನವಾಗಿ ಜನ್ಮಿಸುತ್ತಾರೆ. ತಂದೆತಾಯಿಯ ಋಣ ತೀರಿಸುವ ಮಕ್ಕಳಾಗ್ತಾರೆ.
‘ಮಾಡಿದುಣ್ಣೋ ಮಾರಾಯಾ’ ಎನ್ನುವ ಹಾಗೆ ನಾವು ನಮ್ಮ ತಂದೆತಾಯಿಯರ ಸೇವೆ ಮಾಡುತ್ತೇವೆಯೋ ಹಾಗೆ ಬದುಕಿನ ಕೊನೆಯಲ್ಲಿ ನಮ್ಮ ಮಕ್ಕಳು ನಮಗೆ ಸೇವೆಗೈಯುತ್ತಾರೆ. ವೃದ್ಧ ತಂದೆತಾಯಿಯ ಸೇವೆಗೈದವನೆ ಧನ್ಯವಂತ.
ಹಾಗೆಯೆ ಇದು ಕೇವಲ ಮನುಷ್ಯ ಜನ್ಮದಲ್ಲಷ್ಟೆ ಅಲ್ಲಾ ನಾವು ಪ್ರಾಣಿಗಳ ಪಕ್ಷಿಗಳ ಜೊತೆ ನಡೆದುಕೊಂಡು ರೀತಿಯಲ್ಲೂ ಜನಿಸುತ್ತೇವೆ. ನೀವು ಗೋಮಾತೆಯನ್ನು ನಿಸ್ವಾರ್ಥದಿಂದ ಪೂಜಿಸಿ ಸಾಕಿ ಸಲುಹಿದ್ದರೆ ಪೋಷಿಸಿದ್ದರೆ ಗೋಮಾತೆಯೆ ನಿಮ್ಮ ಸಂತಾನವಾಗುತ್ತೆ ಹಾಗೆನೇ ಸ್ವಾರ್ಥದಿಂದ ಗೋಮಾತೆಯನ್ನು ಸಾಕಿ ಲಾಭ ಪಡೆದು ಹಾಲು ಕೊಡುವದನ್ನು ನಿಲ್ಲಿಸಿದಾಗ ಕಟುಕನಿಗೆ ಮಾರಿದ್ದರೆ ಅದು ನಿಮ್ಮ ವೈರಿಯಾಗಿ ಜನ್ಮ ಪಡೆಯುವುದು. ಆದ್ದರಿಂದ ಜೀವನದಲ್ಲಿ ಯಾರಿಗೂ ಕೆಟ್ಟದ್ದನ್ನು ಬಯಸಬೇಡಿ. ಯಾಕೆಂದರೆ ಪ್ರಕೃತಿ ನಿಯಮದಂತೆ ನೀವೇನೂ ಮಾಡುತ್ತಿರೋ ಅದು ನಿಮಗೆ ದೊರೆಯುತ್ತದೆ. ಈ ಜನ್ಮದಲ್ಲಿ ನೀವು ಮಾಡಿದ ಕರ್ಮಫಲಗಳು ನಿಮ್ಮ ಪ್ರತಿ ಜನ್ಮದಲ್ಲೂ ಪರಿವರ್ತಿಸುತ್ತವೆ. ನೀವು ಒಂದು ರೂಪಾಯಿ ದಾನ ನೀಡಿದ್ದರೆ ನಿಮ್ಮ ಪುಣ್ಣದಲ್ಲಿ ನೂರು ರೂಪಾಯಿ ಜಮೆಯಾಗುತ್ತದೆ.
ಸ್ವಲ್ಪ ಯೋಚಿಸಿನೋಡಿ, ನೀವು ಬರುವಾಗ ಎಷ್ಟು ದುಡ್ಡು ಧನ ಕನಕ ತಂದಿದ್ದಿರಿ. ಹೋಗುವಾಗ ಎಷ್ಟು ಒಯ್ಯುವಿರಿ… ಏನೂ ಇಲ್ಲಾ,ತಾನೆ ಮತ್ತೆಕೆ ಅದು ನಂದು ನಿಂದು ಎಂದೂ ಬಡಿದಾಡುತ್ತಾ ಬದುಕಿಗಿಂತ ಜಾಸ್ತಿ ಗಳಿಸಿ, ಉಳಿಸಿ ಬ್ಯಾಂಕ್ ಪೆಟ್ಟಿಗೆಯಲ್ಲಿ ಬಿಟ್ಟು ಬರಿಗೈಯಲಿ ಹೋಗ್ತಿರಲ್ಲಾ.
ಸಂತಾನ ಹೆಮ್ಮೆ ಪಡುವಂತಿದ್ದರೆ ನೀವು ಗಳಿಸಿಟ್ಟು ಹೋಗಬೇಕಿಲ್ಲಾ ಅವನೇ ಅವನ ಜೀವನ ರೂಸಿಸಿಕೊಳ್ಳುವನು . ಸಂತಾನ ದುಷ್ಟ ದುರಹಂಕಾರಿ ಆಗಿದ್ದರೆ ನೀವೆಷ್ಟು ಗಳಿಸಿಟ್ಟರೂ ಅವನು ಎಲ್ಲಾ ನಾಶಮಾಡಿಬಿಡುವನು. ದಾನಧರ್ಮ ಸೇವೆ ಭಗವಂತನ ಸೇವೆಯೆಂದು ತಿಳಿದು ಅವನಾಡಿಸಿದಂತೆ ನಡೆದು ಎಲ್ಲರಿಗೂ ಶುಭವನ್ನೆ ಬಯಸುತ್ತಾ ಜೀವನ ಸಾಗಿಸಿ .. ಪರರ ಸುಖಕ್ಕೆ ಮರುಗದೆ ಪರರ ದುಃಖಕ್ಕೆ ಮರುಗಿ ಕೈಲಾದ ಸಹಾಯ ನೀಡಿ ಅದೇ ಜೀವನ….
(ಆಧಾರ)